Sunday, December 14, 2014

ಅಂತ್ಯ


ಹೆಪ್ಪುಗಟ್ಟಿದ ನನ್ನ 

ಹಿಮಸದೃಶ ಹೃದಯದಲ್ಲಿ 

ಪ್ರೀತಿಯ ಸೆಲೆ

ಉಕ್ಕಿಸಿದವನು ನೀನು,


ನಿನ್ನ ಮನಸ ಆಣೆಕಟ್ಟೆಯಲಿ 


ನದಿಯಾಗಿ ಭೋರ್ಗರೆವ 

ಹಂಬಲವಿಟ್ಟೆ ನಾನು ,


ಎಂಥ ವಿಪರ್ಯಾಸ !


ನಾನೀಗ -

ಸಾಗರದ ನಡುವಿನ


ಏರಿಳಿತವಿಲ್ಲದ ಶಾಂತ ಅಲೆ.







2 comments:

Badarinath Palavalli said...

ಬಯಸಿದಂತೆಯೇ ದೊರೆತರೆ ಹಸನು ಬಾಳುಮೆ.
ಬೇಡದ್ದು ಪಡೆದು ಬಂದವರ ಪಾಲಿಗೆ ಗೋಳುವೇ!

Vy said...

Good One!!Keep it up!!