ನೀನು ಮತ್ತು ದಾರಿ
ಕ್ರಮಿಸುವ ಹಾದಿ, ನೀನು
ಯಾವತ್ತೂ ಅಸ್ಪಷ್ಟ,
ಮುಂದುವರೆದ ಹಾಗೆಲ್ಲ
ತಿರುವುಗಳನೇಕ, ನಿಗೂಢ.
ಯಾವ ತಿರುವಿನ ತುದಿ ಯಾವ ಗಮ್ಯಕೋ,
ನಿನ್ನ ಪ್ರೀತಿಯ ತೊರೆ ಯಾವ ತೀರಕೋ.
ದಾರಿಗೋ ಸಾಸಿರ ಸಂಗಾತಿ,
ನನಗೇ ನಿನಷ್ಟೇ ಜೊತೆಗಾತಿ,
ಬಿಡುವದಾದರೆ
ಹೇಳಿ ಬಿಡು ಮುನ್ನ,
ಹಿಡಿಯುವೆ ನಾನೂ
ಮರಳಿ ಬಾರದ ದಾರಿಯನ್ನ
ಪರ್ಯವಸಾನ ಪರಸ್ಪರ ಸಂತಸದ ಹೊನಲೇ ಹರಿಸಲಿ.
ReplyDeleteಕಡೆಯಲ್ಲಿ ದಿಕ್ಕು ಬದಲಿಸಿ,ದಾರಿಯ ಬಿಟ್ಟು ವಾಯುಮಾರ್ಗದತ್ತ ಗಮನ .. !! ಆ ದಾರಿಯೂ ಮೌನ .. !!
ReplyDelete