Sunday, October 7, 2012

ಹುಚ್ಚು ಖೋಡಿ ಮನಸು

ಹುಚ್ಚು ಖೋಡಿ ಮನಸು

ಹುಚ್ಚು ಖೋಡಿ ಮನಸು ನೀನು 
ಮಾತೇ ಕೇಳೋಲ್ಲ
ನನ್ನೋಳಗೆನೆ  ಇದ್ದರೂ ನೀನು
ಒಡತಿ ನಾನಲ್ಲ 

ಯಾಕೆ ನಿನಗೆ ಅವನ ಚಿಂತೆ
ನಿನ್ನ ಮನಸು ಅವನಿಗೆ ಗೊತ್ತೇ 
ಪ್ರೀತಿ ಅನ್ನೋದು ಹುಚ್ಚರ ಸಂತೆ
ಆ ನೋವು ನಿನಗೆ ಬೇಕೇ ಮತ್ತೆ

ಅವನಿಲ್ಲದೇ  ಜೀವನ ಇಲ್ಲ 
ಅನ್ನೋದೆಲ್ಲಾ ನಿಜವೇ  ಅಲ್ಲ 
ನನ್ನ ಜೀವ ನಿನ್ನದು
ನಿನ್ನ ಬಡಿತ ನನ್ನದು 





5 comments:

  1. ಅಮಿತ ಅರ್ಪಣಾ ಭಾವ ಮತ್ತು ಮನೋ ನಿಗ್ರಹ ಪ್ರೇರಣಾ ಕವನ.

    www.badari-poems.blogspot.com

    ReplyDelete
  2. ನನ್ನ ಬರಹಗಳನ್ನ ಓದಿ ನನಗೆ ಪ್ರೋತ್ಸಾಹ ನೀಡುವ ನಿಮಗೆ ತುಂಬಾ ಧನ್ಯವಾದಗಳು.
    ನಿಮ್ಮ ಹಾಗೆ ತುಂಬಾ ಚಿಂತನೆ ಮಾಡಿ ಬರಿಯೋ ಶಕ್ತಿ ನನಗಿಲ್ಲ,
    ಏನೋ ಸುಮ್ಮನೆ, ಮನಸ್ಸಿನ ಭಾವನೆಗಳು, ಅಥವಾ ಬೇರೆ ಯಾರದೋ ನೋವು ನೋಡಿ ಹೊರ ಬರುವ ಸಾಲುಗಳು ನನ್ನವು.
    ಹೀಗೆ ಪ್ರೋತ್ಸಾಹ ಸಿಗಲಿ ನಿಮ್ಮಿಂದ.

    ReplyDelete
  3. very heart touching words i think only u feel the heartbeat but nobody knows our pain

    ReplyDelete
  4. nice lines ! thumba chenda ide

    ReplyDelete