Me and my thoughts!!
My little world of words!
Wednesday, October 15, 2014
ಕೊಲೆ
ಅಳಬೇಡ ದಯವಿಟ್ಟು,
ನಿನ್ನ ಕಣ್ಣಿನ ಪ್ರತಿ ಹನಿ
ನನ್ನ ಜೀವನದ ಒಂದೊಂದು
ಕ್ಷಣವನು ಕಡಿಮೆ ಮಾಡತ್ತೆ,
ನಿನ್ನ ನಗು ನನ್ನ ಉಸಿರು
ಅಂತೆಲ್ಲ ಹೇಳಿದ
ನನ್ನ ಪ್ರೀತಿಯ ಹುಡುಗ.....
ಈಗ
ನನ್ನ ನಗುವನ್ನೇ
ಸಾಯಿಸಿಬಿಟ್ಟನಲ್ಲ!!
ಆಸೆ
ಅವನನ್ನು ನೋಡಿದಾಗಲಿಂದ,
ಇಷ್ಟು ವರ್ಷಗಳಲ್ಲಿ ಒಮ್ಮೆಯೂ
ಬರದ ಯೋಚನೆ ಕಾಡುತಿದೆ;
ಮನದಲ್ಲಿ ಒಮ್ಮೆಯೂ
ಮೂಡದ ಆಸೆ ಮೂಡುತಿದೆ;
ನನಗೂ ಹೀಗೆ ಒಬ್ಬ ಮಗನಿರಬೇಕಿತ್ತು
Sunday, February 16, 2014
ಅವನು
ಅವನು
ಹನಿಗವನವಾಗಿ ಬಂದು,
ಕವಿತೆಯಾಗಿ ಮನ ಸೇರಿದ.
ಧಾರಾವಾಹಿಯಾಗಿ ಕಾಡಿಸಿ,
ನೀಳ್ಗತೆಯಾಗಿ ಆವರಿಸಿದ.
ಕಾದಂಬರಿಯಾಗಿ ಜೊತೆಗೂಡಿ,
ಆತ್ಮ ಚರಿತ್ರೆಯಾಗಿ ಹೋದ.
Tuesday, February 11, 2014
ಕನ(ನ)ಸು
ಕನ(ನ)ಸು
ನಿನ್ನ ಕನಸುಗಳನ್ನು ಜೀವಿಸಿ,
ಆಶಿಸಿ, ಹಾತೊರೆದೆ
ಅವು ನನಸಾಗಲೆಂದು;
ಗೊತ್ತಿರಲಿಲ್ಲ,
ನೀನು ಕನಸುಗಳಲ್ಲೇ
ಮಾತ್ರ ಜೀವಿಸುವವ,
ಹೊರ ಲೋಕದ
ಅರಿವು ನಿನಗಿಲ್ಲವೆಂದು.
Tuesday, January 7, 2014
ಕ್ಷಣ ಕ್ಷಣ
ನೀನೊಲಿದ ಆ ಕ್ಷಣದಿಂದ;
ನೀ ಜೊತೆಗಿರುವ ಈ ಕ್ಷಣದವರೆಗೂ;
ಮುಂದೆ ನೀನಿಲ್ಲದ ಆ ಕ್ಷಣದಲ್ಲೂ;
ನಿನ್ನ ಹೆಸರೇ ನನ್ನುಸಿರು ಪ್ರತಿ ಕ್ಷಣದಲೂ.
Newer Posts
Older Posts
Home
Subscribe to:
Posts (Atom)