Thursday, September 19, 2013

ಕೋರಿಕೆ

ಕೋರಿಕೆ

******** 

ನನ್ನ ಪ್ರೀತಿಯ ಹುಡುಗಾ ತಗೆದುಕೋ
ಆ ಸಾಗರದಡಿಯ ಮುತ್ತುಗಳಿಗಿಂತ 

ಜಾಸ್ತಿ ಸಿಹಿ ಮುತ್ತುಗಳನ
ಎಣಿಸಲಸಾಧ್ಯವಾದ ತೆರೆಗಳಿಗಿಂತ  
ಜಾಸ್ತಿ ಅಪ್ಪುಗೆಗಳನ
ಆಕಾಶದೊಳಗಿನ ತಾರೆಗಳಿಗಿಂತ 
ಜಾಸ್ತಿ ನನ್ನ ಮುಗುಳ್ನಗೆಗಳನ
ಆದರೆ ಕೊಡುವದಿಲ್ಲ  ಮಾತ್ರ
ಸಾಗರದಾಳದ ನನ್ನ ಮನಸಿನ ನೋವನ್ನ
ತೆರೆಗಳಿಗಿಂತ ಜೋರಾಗಿ ಬರುವ ಅಳುವನ್ನ
ತಾರೆಗಳ ಹಿಂದಿನ ಕತ್ತಲಿನಷ್ಟಿರುವ ದುಃಖವನ್ನ

Sunday, August 25, 2013

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು

ಈರುಳ್ಳಿ ಹಾಗು (ಮೊಸಳೆ) ಕಣ್ಣೀರು
***********************

ಈರುಳ್ಳಿ ಬೆಲೆ ಎರಿತು  ಗಗನಕ್ಕೆ
ಅಳು ಏರಿತು ತಾರಕಕ್ಕೆ
ಅತ್ತದ್ದು ಎಷ್ಟು ದಿನ?
ತಿನ್ನೋದು ಬಿಟ್ಟಿದ್ದು ಎಷ್ಟು ಜನ
Crying Onion Royalty Free Stock Images - Image: 14806619


ಅಳು ಕೇಳಿದ ಸರಕಾರ
ಹಾಕಿದ್ದು ಬರೀ  (ಮೊಸಳೆ)ಕಣ್ಣೀರು
ಗೊತ್ತಾದರೂ ಏನು ಮಾಡುವರು
ಶ್ರೀಸಾಮಾನ್ಯರು ಇವರು

ಇದೆಲ್ಲಾ ಆಗಿದೆ ಅವರಿಗೆ ರೂಢಿ
ದುಷ್ಟ ಬುದ್ಧಿಯೆಲ್ಲಾ ಕೂಡಿ
ಮಾಡಿದ್ದಾರೆ  ಇವರಿಗೆ ಮೋಡಿ
ಎಷ್ಟು ದಿನ ಈ (ಮೊಸಳೆ)ಕಣ್ಣೀರು ಕಾದು ನೋಡಿ
ಚಿತ್ರ ಕೃಪೆ ಇಲ್ಲಿ

Wednesday, August 14, 2013

ಸ್ವತಂತ್ರ ದೇಶ

ಸ್ವತಂತ್ರ ದೇಶ
***********
ಸ್ವಾತಂತ್ರ್ಯ ಬಂದು ಆಯಿತು
ವರುಷ ಆರವತ್ತೇಳು
ಪ್ರತಿ  ವರುಷವೂ ಆಯಿತು
ಬರಿ ಅಳುವದೇ ಈ ದೇಶದ ಗೋಳು

ಯಾರು ಬಂದರೂ ಏನೇ ಆದರೂ
ನಮಗಿಲ್ಲ ಒಂದಿಷ್ಟು ಖಬರೂ
ನಾವು ಮಾತ್ರ ಮಲಗಿದ್ದೇವೆ
ಹಾಸಿ ಹೊದ್ದು ಚದ್ದರು

ಗೆದ್ದ ನಾಯಕರಿಗೆ ಬಂದಿದೆ
ದುಡ್ಡಿನ ಅಮಲು
ಅವರಿಗೆ ನೀಡಿ
ದೇಶದ ನೇಗಿಲು
ಅದಕ್ಕೆ ಹಿಡಿಸಿದ್ದೇವೆ
ಪೂರ್ತಿ ಗೆದ್ದಲು

ಸೋತ ನಾಯಕರ ಸುಳ್ಳು
ಭರವಸೆಗಳು ಮಾಡುತ್ತಿವೆ
ಜನ ಸಾಮಾನ್ಯನ
ಜೀವನವ ಪೊಳ್ಳು

ಆದರೂ  ಆಚರಿಸಿ
ಚೆನ್ನಾಗಿ ಸ್ವಾತಂತ್ಯೋತ್ಸವ
ಯಾಕೆಂದರೆ ಸಿಗುವದು
ಒಂದು ದಿನ ರಜಾ
ಮಾಡಲು ಪೂರ್ತಿ ಮಜಾ





Sunday, July 28, 2013

ಕಾಣದ ಕೈಗಳ ಆಟ

ಕಾಣದ ಕೈಗಳ ಆಟ
****************** 

ಮಧ್ಯಾಹ್ನದ ಬಿಸಿ ಊಟ 
ಸಾಕು ಮಕ್ಕಳ ಪರದಾಟ 
ನಿಲ್ಲಿಸಿ ಹೆತ್ತವರ ಗೋಳಾಟ 
ಸಾಕು ಮಾಡಿ 
ಕಣ್ಣೋರಿಸುವ ಈ ಆಟ 

ಕೊಡುವದಾದರೆ ಕೊಡಿ 
ನಮಗೆ ಕೈ ತುಂಬಾ ಕೆಲಸ 
ಮಕ್ಕಳಿಗೆ ಮೈ ತುಂಬಾ ದಿರಿಸ 
ತಿನಿಸುವೆವು ಅವರಿಗೆ ನಾವೇ 
ಪ್ರೀತಿಯಿಂದ ಬಿಸಿ ಊಟ
ಬಿಸಿ ಊಟ 

Friday, July 19, 2013

ಬುದ್ಧ, ನಾನು ಮತ್ತು ನೀನು

ಬುದ್ಧ, ನಾನು ಮತ್ತು ನೀನು 
******************

ದೇವರ ಧ್ಯಾನ ಮಾಡಿದ ಬುದ್ಧನಿಗೆ
ಸಾವಿರಾರು ಅನುಯಾಯಿಗಳು
ನಿನ್ನ ಧ್ಯಾನ ಮಾಡಿದ ನನಗೆ
ನೂರಾರು ಶತ್ರುಗಳು

ಮನಶಾಂತಿಗಾಗಿ ಮನೆಯನ್ನು ಬಿಟ್ಟ ಆ  ಬುದ್ಧ
ಪೂರ್ತಿ ಸಂಸಾರವೇ ಅವನ ಮನೆಯಾಯಿತು
ನಿನಗಾಗಿ ಮನೆಯನ್ನು ಬಿಟ್ಟ ನಾನು
ಹುಚ್ಚನ ಹಾಗೆ ಸಂಸಾರವೆಲ್ಲ  ಅಲೆದಾಡಿದೆ.


ಸಾವಿಲ್ಲದ ಮನೆಯ ಸಾಸಿವೆಯ ತರ ಹೇಳಿ
ಸಂತೈಸಿದ ಆ ಬುದ್ಧ
ನೀನಿಲ್ಲದ ಮನೆಯಲ್ಲಿ ಸಾಸಿವೆಗೂ 
ಸಾವು ಅಂದೆ ನಾನು

ಆಸೆಯೇ ದುಃಖಕ್ಕೆ ಮೂಲ 
ಉಪದೇಶಿಸಿದ ಆ ಬುದ್ಧ
ನಿನ್ನ ಜೊತೆ ಇರುವ ಆಸೆ ನನಸಾದಾಗ
ಸೇರಿತು ಉಪದೇಶ ಮೂಲೆ

ಬುದ್ಧನಿಗೆ ಜ್ಞಾನೋದಯ ಆಗಿದ್ದು
ಬೋಧಿ ವೃಕ್ಷದ  ಕೆಳಗೆ
ನನಗೆ ಪ್ರೇಮೋದಯ  ಆಗಿದ್ದು
ನಿನ್ನ ಮನೆಯ ಒಳಗೆ