Thursday, September 19, 2013

ಕೋರಿಕೆ

ಕೋರಿಕೆ

******** 

ನನ್ನ ಪ್ರೀತಿಯ ಹುಡುಗಾ ತಗೆದುಕೋ
ಆ ಸಾಗರದಡಿಯ ಮುತ್ತುಗಳಿಗಿಂತ 

ಜಾಸ್ತಿ ಸಿಹಿ ಮುತ್ತುಗಳನ
ಎಣಿಸಲಸಾಧ್ಯವಾದ ತೆರೆಗಳಿಗಿಂತ  
ಜಾಸ್ತಿ ಅಪ್ಪುಗೆಗಳನ
ಆಕಾಶದೊಳಗಿನ ತಾರೆಗಳಿಗಿಂತ 
ಜಾಸ್ತಿ ನನ್ನ ಮುಗುಳ್ನಗೆಗಳನ
ಆದರೆ ಕೊಡುವದಿಲ್ಲ  ಮಾತ್ರ
ಸಾಗರದಾಳದ ನನ್ನ ಮನಸಿನ ನೋವನ್ನ
ತೆರೆಗಳಿಗಿಂತ ಜೋರಾಗಿ ಬರುವ ಅಳುವನ್ನ
ತಾರೆಗಳ ಹಿಂದಿನ ಕತ್ತಲಿನಷ್ಟಿರುವ ದುಃಖವನ್ನ

1 comment:

  1. "ಮನೆ ಮಂದಿಗೆಲ್ಲ ಸುಖ ನೀಡಬಲ್ಲ"
    ಎನ್ನುತ್ತಾರೆ ಸಿನಿಮಾ ಕವಿ. ಅಂತೆಯೇ ಹೆಣ್ಣೂ ಸಹ. ನೂರು ನೋವುಗಳ ನುಂಗಿ ನಲಿವನೇ ಹಂಚುವ ಆಕೆಯ ಇರುವಿಕೆಯೇ ದೈವ ಸಾನಿಧ್ಯ.

    ತುಂಬಾ ಅರ್ಥಗರ್ಭಿತ ಕವನವಿದು. ಆಕೆಯ ಒಳ್ಳೆಯತನ ನಲ್ಲನಿಗೂ ಅರ್ಥವಾಗಲಿ. ಅವನೂ ನಲಿವನ್ನೇ ಉಂಟುಮಾಡಲಿ ಮತ್ತು ಹಂಚಲಿ.

    ReplyDelete