ಬುದ್ಧ, ನಾನು ಮತ್ತು ನೀನು
******************
ದೇವರ ಧ್ಯಾನ ಮಾಡಿದ ಬುದ್ಧನಿಗೆ
ಸಾವಿರಾರು ಅನುಯಾಯಿಗಳು
ನಿನ್ನ ಧ್ಯಾನ ಮಾಡಿದ ನನಗೆ
ನೂರಾರು ಶತ್ರುಗಳು
ಮನಶಾಂತಿಗಾಗಿ ಮನೆಯನ್ನು ಬಿಟ್ಟ ಆ ಬುದ್ಧ
ಪೂರ್ತಿ ಸಂಸಾರವೇ ಅವನ ಮನೆಯಾಯಿತು
ನಿನಗಾಗಿ ಮನೆಯನ್ನು ಬಿಟ್ಟ ನಾನು
ಹುಚ್ಚನ ಹಾಗೆ ಸಂಸಾರವೆಲ್ಲ ಅಲೆದಾಡಿದೆ.
ಸಾವಿಲ್ಲದ ಮನೆಯ ಸಾಸಿವೆಯ ತರ ಹೇಳಿ
ಸಂತೈಸಿದ ಆ ಬುದ್ಧ
ನೀನಿಲ್ಲದ ಮನೆಯಲ್ಲಿ ಸಾಸಿವೆಗೂ
ಸಾವು ಅಂದೆ ನಾನು
ಆಸೆಯೇ ದುಃಖಕ್ಕೆ ಮೂಲ
ಉಪದೇಶಿಸಿದ ಆ ಬುದ್ಧ
ನಿನ್ನ ಜೊತೆ ಇರುವ ಆಸೆ ನನಸಾದಾಗ
ಸೇರಿತು ಉಪದೇಶ ಮೂಲೆ
ಬುದ್ಧನಿಗೆ ಜ್ಞಾನೋದಯ ಆಗಿದ್ದು
ಬೋಧಿ ವೃಕ್ಷದ ಕೆಳಗೆ
ನನಗೆ ಪ್ರೇಮೋದಯ ಆಗಿದ್ದು
ನಿನ್ನ ಮನೆಯ ಒಳಗೆ