ಜಾಣೆ
ಹತ್ತಲೇ ಇಲ್ಲ ಹಣತೆ
ಅದಕ್ಕೂ ಗೊತ್ತಾಗಿದೆ
ನೀನಿದ್ದಾಗ ಅದರ
ಅವಶ್ಯಕತೆ ಇಲ್ಲ ಎಂದು
ಸವತಿ
ಈ ಹಣತೆಗೇನೋ ಒಂಥರಾ
ಮತ್ಸರ ನಿನ್ನೊಡನೆ
ನಾನಾರಿಸುವೇನಲ್ಲ ಅದನ್ನ
ನೀ ಬಳಿ ಬಂದೊಡನೇ
ವ್ಯತ್ಯಾಸ
ಹಣತೆ ಉರಿಯತ್ತೆ
ಜಗಕೆ ಬೆಳಕು ನೀಡಲು
ನೀನು ಉರಿಯುತ್ತಿ ನಾ
ನಿನ್ನ ಮಾತು ಕೇಳಲಿಲ್ಲ ಎಂದು
ರಹಸ್ಯ
ಗೆಳತಿಯರೇ
ನೀನು ಮತ್ತು ಹಣತೆ
ಅದಕ್ಹೇಗೆ ಗೊತ್ತು
ನಮ್ಮಿಬ್ಬರ ಎಲ್ಲ ಮಾತುಕತೆ
ವ್ಯಂಗ್ಯ
ಹಣತೆ ಮುಂಜಾನೆ ನನ್ನ
ನೋಡಿ ನಕ್ಕಾಗಲೇ
ತಿಳಿಯಿತು
ಅದು ಕೂಡ ರಾತ್ರಿಯೆಲ್ಲ
ಎಚ್ಚರವಿತ್ತು
ಪರಿಣಾಮ
ದುರುದುರನೆ ನನ್ನ
ನೋಡಿತು ಹಣತೆ
ಅದಕೂ ಕೋಪ
ನಿನಗೆ ಬೆನ್ನು ಮಾಡಿ
ಮಲಗಿದ ನನ್ನ ಮೇಲೆ
ಸಾಮ್ಯತೆ
ಹಣತೆ ಮತ್ತು ನೀನು
ಇಬ್ಬರು ಸುಂದರಿಯರೇ
ಅದು ದುಂಡಗೆ ಅಗಲವಾಗಿದೆ
ನೀನು ಅಷ್ಟೇ
ರಹಸ್ಯ
ಗೆಳತಿಯರೇ
ನೀನು ಮತ್ತು ಹಣತೆ
ಅದಕ್ಹೇಗೆ ಗೊತ್ತು
ನಮ್ಮಿಬ್ಬರ ಎಲ್ಲ ಮಾತುಕತೆ
ವ್ಯಂಗ್ಯ
ಹಣತೆ ಮುಂಜಾನೆ ನನ್ನ
ನೋಡಿ ನಕ್ಕಾಗಲೇ
ತಿಳಿಯಿತು
ಅದು ಕೂಡ ರಾತ್ರಿಯೆಲ್ಲ
ಎಚ್ಚರವಿತ್ತು
ಪರಿಣಾಮ
ದುರುದುರನೆ ನನ್ನ
ನೋಡಿತು ಹಣತೆ
ಅದಕೂ ಕೋಪ
ನಿನಗೆ ಬೆನ್ನು ಮಾಡಿ
ಮಲಗಿದ ನನ್ನ ಮೇಲೆ
ಸಾಮ್ಯತೆ
ಹಣತೆ ಮತ್ತು ನೀನು
ಇಬ್ಬರು ಸುಂದರಿಯರೇ
ಅದು ದುಂಡಗೆ ಅಗಲವಾಗಿದೆ
ನೀನು ಅಷ್ಟೇ
image source: google
http://www.tulasivana.com
ReplyDeleteಮೊದಲು ತಡವಾಗಿ ಪ್ರತಿಕ್ರಿಯೆ ಬರೆಯುತ್ತಿರುವುದಕ್ಕಾಗು ಕ್ಷಮೆ ಇರಲಿ. ಇಲ್ಲಿ ತುಂಬಾ net ಸಮಸ್ಯೆ ಇತ್ತು.
ReplyDeleteಹಣತೆಯನ್ನು ಸಮೀಕರಿಸಿದ ರೀತಿಯಲ್ಲೇ ಇಲ್ಲಿಯ ಗೆಲುವಿದೆ. ಹನಿಗವನಗಳ ಮೂಲ ಗುಣವನ್ನು ಕಾಪಾಡಿಕೊಳ್ಳುವುದು ತ್ರಾಸದಾಯಕ ಕೆಲಸ. ಅದರಲ್ಲೂ ನೀವು ಗೆದ್ದಿದ್ದೀರಿ.
ಇಲ್ಲಿ ನನಗೆ ಎಲ್ಲ ಹನಿಗವನಗಳು ನೆಚ್ಚಿಗೆಯಾದವು, ಮುಖ್ಯವಾಗಿ ಪರಿಣಾಮ. ತುಂಬಾ ಮಾರ್ಮಿಕ.