ವಾಸ್ತವ
~~~~~
ಕೈ ಕೈ ಹಿಡಿದೇ ನಡೆದೆವು
ಸಾಗರದ ಮರಳಿನ ಮೇಲೆ
ಹಿಂದುರಿಗಿ ನೋಡಿದಾಗ ಕಂಡವು
ನನ್ನ ಹೆಜ್ಜೆ ಗುರುತು ಮಾತ್ರ
ಒಬ್ಬರಿಗೊಬ್ಬರು ಅಂಟಿಯೇ
ನಿಂತಿದ್ದು ಕನ್ನಡಿಯ ಮುಂದೆ
ಪ್ರತಿಬಿಂಬದಲ್ಲಿ ಕಂಡಿತು
ನನ್ನ ದೇಹ ಮಾತ್ರ
ಕೂಡಿಯೇ ಕನಸು ಕಂಡೆವು
ಪ್ರತಿ ಕ್ಷಣ ಜೊತೆಗಿರುವೆವೆಂದು
ಎಚ್ಚರವಾದಾಗ ಉಳಿದಿದ್ದು
ನಾನೊಬ್ಬಳು ಮಾತ್ರ
photos:google source
ಈ ಏಕಾಂತ ತುಂಬಾ ಕಾಡುವ ಪ್ರಶ್ನೆ! ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ
ReplyDelete