Monday, May 20, 2013

...ಲ್ಲ


...ಲ್ಲ 

ರಾತ್ರಿಯೆಲ್ಲ ನಿದ್ದೆಯಿಲ್ಲ 
ಮೈ ಕೈ ನೋವಾಯಿತೆಲ್ಲ 
ಕೆಂಪಾಯಿತು ಎರಡು ಗಲ್ಲ!!
 ಆಗುತಿದ್ದ ಸಪ್ಪಳಕ್ಕೆ 
ಮನೆಮಂದಿಗೆಲ್ಲ ನಿದ್ದೆಯಿಲ್ಲ 
ಏನೇನೊ ತಿಳಿದಿರಲ್ಲ !!
ಕಾರಣ ಮಾತ್ರ ನಲ್ಲನಲ್ಲ 
ರಾತ್ರಿಯೆಲ್ಲಾ ಕರೆಂಟ್ ಇಲ್ಲ 
ಕಚ್ಚುತಿತ್ತು ಸೊಳ್ಳೆಯೆಲ್ಲ!! 

1 comment:

  1. ಶೀರ್ಷಿಕೆಗೆ 100 ಅಂಕಗಳು. ತಮಾಷೆಯಾಗಿದೆ :)

    ReplyDelete