ಗೋರಿಯಲ್ಲಿನ ಹೆಣ ಥಟ್ಟನೆ ಎದ್ದು ಬಂದಂತೆ
ಈ ನೆನಪುಗಳು
ಬರದ ಭೂಮಿಗೆ ಒಮ್ಮೆಲೇ ಮಳೆ ಸುರಿದಂತೆ
ಈ ನೆನಪುಗಳು
ಮರಭೂಮಿಯಲ್ಲಿಯ ಮರೀಚಿಕೆಯ ಹಾಗೆ
ಈ ನೆನಪುಗಳು
ಭಯದ, ಖುಷಿಯ,ಸಿಹಿಯ,ಕಹಿಯ
ಈ ನೆನಪುಗಳು
ಭೂತಕಾಲದ ಪಿಶಾಚಿ,
ವರ್ತಮಾನದ ಅನುಭವ,
ಭವಿಷ್ಯದ ಆಧಾರ
ಈ ನೆನಪುಗಳು
ಯಾರಿಗೆ ಬೇಡ ಯಾರಿಗೆ ಬೇಕು
ಈ ನೆನಪುಗಳು
ನೆನಪಿದೆಯೇ ಮೊದಲ ಪ್ರೇಮ
ReplyDeleteಅಂದರೊಬ್ಬ ಕವಿ
ನೆನಪಾದರೆ ಯಮ ಯಾತನೆ
ಅಂದನೀ ಅಙ್ಞಾತ ಕವಿ