ಕನ್ನಡವ್ವನ ಸೀರೆ
ನನ್ನ ಕನ್ನಡವ್ವನ ಸೀರೆ ಹರಿದು ಹೋಗಿದೆ
ನಾವೆಲ್ಲ ವಲಸೆ ಹೋಗಿ;
ಇದ್ದಲ್ಲೇ ಅವಳ ಮರೆತು,
ಅನ್ಯ ಭಾಷೆಯ ತೇಪೆ ಹಚ್ಚಿ ಹೊಲಿದರೆ
ಚೆಂದ ಕಾಣಿಸ್ತಾಳಾ ನಮ್ಮವ್ವ ?
ಅವಳಿಗೆ ಬೇಕು ಹೊಸ ಸೀರೆ ತನ್ನದೇ
ನೋಯಿಸಬೇಕೆ ಅವಳನ್ನ?
ಕೊಡಲಾಗದೇ ಅಷ್ಟು ಕೂಡ
ಕನ್ನಡದ ಮಕ್ಕಳು ನಾವು;
ಅವಳ ಋಣ ನಮಗೆ ತೀರಿಸಲಾಗದೇ?
ಮುಗಿಯಿತು ನವೆಂಬರ್
ಕಾಯಬೇಕಾ ಅವಳು
ಮತ್ತೆ ಒಂದು ವರುಷ?
ಬಳಿಸಿ ಕನ್ನಡ ಪ್ರತಿಕ್ಷಣ;
ಸಿಂಗರಿಸಿ ಅವಳನ್ನ
ನಾವು ಪಡಬಾರದೇ ಹರುಷ?