Monday, December 2, 2013

ಕನ್ನಡವ್ವನ ಸೀರೆ

ಕನ್ನಡವ್ವನ ಸೀರೆ

ನನ್ನ ಕನ್ನಡವ್ವನ ಸೀರೆ ಹರಿದು ಹೋಗಿದೆ 
ನಾವೆಲ್ಲ ವಲಸೆ ಹೋಗಿ; 
ಇದ್ದಲ್ಲೇ ಅವಳ ಮರೆತು, 
ಅನ್ಯ ಭಾಷೆಯ ತೇಪೆ ಹಚ್ಚಿ ಹೊಲಿದರೆ 
ಚೆಂದ ಕಾಣಿಸ್ತಾಳಾ ನಮ್ಮವ್ವ ?

ಅವಳಿಗೆ ಬೇಕು ಹೊಸ ಸೀರೆ ತನ್ನದೇ 
ನೋಯಿಸಬೇಕೆ ಅವಳನ್ನ?
ಕೊಡಲಾಗದೇ ಅಷ್ಟು ಕೂಡ 
ಕನ್ನಡದ ಮಕ್ಕಳು ನಾವು; 
ಅವಳ ಋಣ ನಮಗೆ ತೀರಿಸಲಾಗದೇ?

ಮುಗಿಯಿತು ನವೆಂಬರ್ 
ಕಾಯಬೇಕಾ ಅವಳು 
ಮತ್ತೆ ಒಂದು ವರುಷ?
ಬಳಿಸಿ ಕನ್ನಡ ಪ್ರತಿಕ್ಷಣ;
ಸಿಂಗರಿಸಿ ಅವಳನ್ನ 
ನಾವು ಪಡಬಾರದೇ ಹರುಷ?

1 comment:

  1. ನಾಡ ಈವತ್ತಿನ ಸ್ಥಿತಿಯನ್ನು ಮನ ಕರಗುವಂತೆ ಬರೆದುಕೊಟ್ಟಿದ್ದೀರಾ ಇಲ್ಲಿ. ಕ್ಯಾತೆಗಾರ ನೆರಮನೆ, ಕೆಟ್ಟ ರಾಜಕಾರಣಿಗಳು ಮತ್ತು ಒಳಗಿರದ ನಿಜ ಪ್ರೀತಿ ಹೀಗೆ ಪಟ್ಟಿ ಬೆಳೆಯುತ್ತದೆ, ಕಣ್ಣೀರಿನ ಹನಿಗಳಂತೆ...

    ReplyDelete