Thursday, January 2, 2014

ಹೊಸ~ಹಳೆ


ಹೊಸ~ಹಳೆ
********

ಬೆಸೆದಂತೆ ಹೊಸ
ಸಂಬಂಧಗಳು
ಕಳಚದಿರಲಿ
ಹಳೆ ಕೊಂಡಿಗಳು

ಮೂಡಿದಂತೆ ಹೊಸ
ಆಸೆಗಳು
ಬಾಡದಿರಲಿ
ಹಳೆ ಕನಸುಗಳು

ಬಂದಂತೆ ಹೊಸ
ವರುಷಗಳು
ಮರೆಯದಿರಲಿ
ಹಳೆ ಹರುಷಗಳು



1 comment:

  1. ಹಿಂದಿನ ಸ್ಮರಣೆಯಲೇ ತಿದ್ದಿಕೊಳ್ಳಬಹುದು ಹೊಸ ಹೆಜ್ಜೆಗಳ. ಒಳ್ಳೆಯ ಮಾರ್ಮಿಕ ಕವನ.

    ReplyDelete