Tuesday, December 3, 2013

ಸೋಲು


ಕತ್ತಲವ ನುಂಗಿದ 
ಬೆಳಕಿನ ಅಹಂಕಾರ 
ಸೋತಿತು  ಮತ್ತೆ
ಇರುಳು ಆವರಿಸಿದಾಗ

day and night by adypetrisor

  ಸೊಕ್ಕಿನಿಂದ 
 ಮೆರೆಯುತ್ತಿದ್ದ ಇರುಳಿಗೆ 
ಸಾಕಾಯಿತು ಬೆಳಕಿನ 
ಒಂದೇ ಕಿರಣ



ಛಾಯಾ ಚಿತ್ರ ಕೃಪೆ : ಅಂತರ್ಜಾಲ 
 

Monday, December 2, 2013

ಕನ್ನಡವ್ವನ ಸೀರೆ

ಕನ್ನಡವ್ವನ ಸೀರೆ

ನನ್ನ ಕನ್ನಡವ್ವನ ಸೀರೆ ಹರಿದು ಹೋಗಿದೆ 
ನಾವೆಲ್ಲ ವಲಸೆ ಹೋಗಿ; 
ಇದ್ದಲ್ಲೇ ಅವಳ ಮರೆತು, 
ಅನ್ಯ ಭಾಷೆಯ ತೇಪೆ ಹಚ್ಚಿ ಹೊಲಿದರೆ 
ಚೆಂದ ಕಾಣಿಸ್ತಾಳಾ ನಮ್ಮವ್ವ ?

ಅವಳಿಗೆ ಬೇಕು ಹೊಸ ಸೀರೆ ತನ್ನದೇ 
ನೋಯಿಸಬೇಕೆ ಅವಳನ್ನ?
ಕೊಡಲಾಗದೇ ಅಷ್ಟು ಕೂಡ 
ಕನ್ನಡದ ಮಕ್ಕಳು ನಾವು; 
ಅವಳ ಋಣ ನಮಗೆ ತೀರಿಸಲಾಗದೇ?

ಮುಗಿಯಿತು ನವೆಂಬರ್ 
ಕಾಯಬೇಕಾ ಅವಳು 
ಮತ್ತೆ ಒಂದು ವರುಷ?
ಬಳಿಸಿ ಕನ್ನಡ ಪ್ರತಿಕ್ಷಣ;
ಸಿಂಗರಿಸಿ ಅವಳನ್ನ 
ನಾವು ಪಡಬಾರದೇ ಹರುಷ?

Sunday, December 1, 2013

ಕಾಲ ದೀಪ


ಕಾಲ ದೀಪ 

ಸೂರ್ಯನ ಹಿಂದೆ ದೀಪ ಹಚ್ಚಿ
ಹಬ್ಬ ಮಾಡುವದನ್ನು ನೋಡಿ
ಆ ಚಂದಿರ ನಕ್ಕನಂತೆ
ದೀಪ ಹಚ್ಚಲು ಕತ್ತಲೆಗೆ ಕಾಯಬೇಕೇ?
ಬಾಳ  ಬೆಳಗಲು ಸಮಯ ನೋಡಬೇಕೇ?
ಹಚ್ಚಿದ ದೀಪ ಆರದೇ ?
ಸಮಯ ಸರಿದರೆ ಬರುವದೇ?



Wednesday, October 30, 2013

ಕಳೆದು ಹೋಗಿದೆ

ಕಳೆದು ಹೋಗಿದೆ
************
ಕಳೆದು ಹೋಗಿದೆ
ಹುಡುಕಿ ಕೊಡಿ
ಬಹಳ ಬೆಲೆಯುಳ್ಳದ್ದು
ಸಿಕ್ಕರೆ  ದಯವಿಟ್ಟು ತಿಳಿಸಿಬಿಡಿ
ಅವರು ಮಾತಾಡೋದು ಎನ್ನಡ ಎಕ್ಕಡ
ಇವರು ಮಾತಾಡೋದು ಕಹಾನ್ ಕಿಧರ್
ಎಲ್ಲರೂ ಕೇಳೋದು ಹೂ ಆರ್ ಯು ಡಿಯರ್
ಕೊನೆಗೆ ಯಾರೋ ಹೇಳಿದರು
ನಾಳೆ ನವೆಂಬರ್ ೧
ನಾಳೆ ಮಾತ್ರ ಸಿಗತ್ತೆ
ನಾಳೆ ಮಾತ್ರ ಕೇಳಿಸೊತ್ತೆ
ಬೇಗ ಹೋಗಿ ಹಿಡ್ಕೊಳ್ಳಿ
ಇಲ್ಲ ಪೂರ್ತಿ ವರ್ಷ ಹುಡ್ಕೊಳ್ಳಿ

Tuesday, October 29, 2013

ವೈರುಧ್ಯ

ವೈರುಧ್ಯ
*****
ಕಡಿಮೆ ಅಂಕ ತಗೆಯೋ ದೊಡ್ಡವಳಿಗೆ :
ಆ ಪಕ್ಕದ್ಮನೆ ಹುಡುಗಿ ಜೊತೆ ಓದು,
ಅವಳ ಜೊತೆ ಇರು,
ನಿನಗೂ ಒಳ್ಳೆ ಅಂಕ ಬರತ್ತೆ;
ಜಾಸ್ತಿ ಅಂಕ ತಗೆಯುವ ಸಣ್ಣವಳಿಗೆ :
ನಿನ್ನ ಆ ಗೆಳತಿ ಜೊತೆ ಬಹಳ ಆಟ ಆಡಬೇಡ,
ಅವಳು ದಡ್ದಳು, ನೀನು ಹಾಗೆ ಆಗ್ತಿಯ!!!!