Showing posts with label kannada article. Show all posts
Showing posts with label kannada article. Show all posts

Wednesday, August 29, 2012

ಕೊನೆ ಮಾತು


ಚಿನ್ನು
ನಿನ್ನನ್ನ ತುಂಬಾ ಮಿಸ್ ಮಾಡ್ತಾ ಇದೀನಿ. ಪ್ರತಿ ಕ್ಷಣ ನಿನ್ನದೇ ನೆನಪು. ನೀನೆ ನನ್ನ ಮನಸಲ್ಲಿ. ಏನ್ ಮಾಡ್ಲಿ ಗೊತ್ತಾಗ್ತಾ ಇಲ್ಲ. 
ನಿನದೇ  ನೆನಪು ದಿನವು ಮನದಲ್ಲಿ, 
ನೋಡುವ ಆಸೆಯು ತುಂಬಿದೆ ನನ್ನಲಿ....
ನೀನು ಪ್ರೀತಿ ಮಾಡಿದ ಹಾಗೆ ನನಗೆ ಮಾಡೋಕೆ ಬರಲ್ಲಾ . ನಿನ್ನ  ಹಾಗೆ  ಮನಸಿನ ಭಾವನೆಗಳನ್ನ ಹಂಚ್ಕೊಳೋಕೆ  ಆಗಲ್ಲ. ಆದರೆ ನಾನು ನಿನ್ನನ್ನ ನಿನ್ನಷ್ಟೇ  ಪ್ರೀತಿ ಮಾಡ್ತೀನಿ. ನಿನ್ನ ಮಾತು, ನಿನ್ನ ಕಣ್ಣುಗಳು ನನ್ನನ್ನ ಕಾಡ್ತಾ ಇವೆ. ನಿನ್ನ ಪ್ರೀತಿನ ಪೂರ್ತಿಯಾಗಿ ಪಡ್ಕೊಬೇಕು, ನಿನ್ನ ಜೊತೆ ಮಗುವಾಗಿ ಇರಬೇಕು. ನೀನು ಮಾಡೋ ತುಂಟತನವನ್ನ ನಾನು ಅನುಭವಿಸಬೇಕು. ನಿನ್ನ ಪ್ರೀತಿಯಲ್ಲಿ ಪೂರ್ತಿಯಾಗಿ ಮುಳುಗಿ ನನ್ನನ್ನ ನಾನು ಮರಿಬೇಕು ಚಿನ್ನು. ಇನ್ನು ಏನೇನೋ ಆಸೆ. 
ನೂರು ಜನುಮಕು, ನೂರಾರು ಜನುಮಕು.....
ಆದ್ರೆ ಯಾಕೆ ಹೀಗೆ ಆಯ್ತು? ಎಲ್ಲಿ ಹೋಯ್ತು ನಮ್ಮ ಪ್ರೀತಿ? ನಮ್ಮ ಪ್ರೀತಿಯ ಮೊದಲ ದಿನಗಳು ಎಲ್ಲಿ ಹೋದವು? ನಾನು ನೀನು  ಪ್ರೀತಿ ಮಾಡಿದ್ದೂ ಕನಸೇ? ಯಾಕೆ ಹೀಗೆ? 
   ಮತ್ತದೇ ಬೇಸರ , ಅದೇ ಸಂಜೆ , ಅದೇ ಏಕಾಂತ !!!
ನಿನ್ನ ಜೊತೆ ಇಲ್ಲದೇ, ಮಾತಿಲ್ಲದೇ, ಮನ ವಿಭ್ರಾಂತ  

ನೀನು ಕೊಟ್ಟ  ನೋವುಗಳ ತೂಕಾನೆ  ಜಾಸ್ತಿ ಅನಿಸ್ತಾ  ಇದೆ. ನೋವು ಮೈಗೆ  ಮಾತ್ರ ಅಲ್ಲ ಮನಸ್ಸು ಹೆದರಿ ಗುಬ್ಬಿ ಮರಿ ಹಾಗೆ ನಡಗ್ತಾ  ಇರತ್ತೆ. ಅಷ್ಟೊಂದು ಪ್ರೀತಿ ಇರೋ ಮನಸ್ಸಲ್ಲಿ ಇಷ್ಟೊಂದು ಕ್ರೂರತನ  ಇರಬಹುದು ಅಂತ ನಾನು ಕನಸಲ್ಲೂ  ನೆನೆಸಿರಲಿಲ್ಲ.  ನಿನ್ನ ತಪ್ಪಿನ ಅರಿವು ಈಗ ನಿನಗೆ ಆಗಿದೆ. ನನಗ್ಗೊತ್ತು ನೀನು ಈಗ ನನ್ನ ನಿನ್ನ ಜೀವಕ್ಕಿಂತ ಪ್ರೀತಿ ಮಾಡ್ತಿಯಾ ., ಅದೂ ಒಂಥರಾ ಹೆದರಿಕೆ ಚಿನ್ನು, ಎಲ್ಲಿ ಮತ್ತೆ ಅದೇ  ನೋವನ್ನ ನಾನು ಅನುಭವಿಸಬೇಕು ಅಂತ.
ನಾನು ನಿನಗೆ ನೋವೇ  ಕೊಟ್ಟಿಲ್ಲ ಅಂದ್ರೆ ತಪ್ಪಾಗೋತ್ತೆ, ನಿನ್ನ ಜೊತೆ ಎಷ್ಟೋ ಸರಿ ಸುಮ್ನೆ ಜಗಳ ಮಾಡಿದಿನಿ, ನಿನ್ನನ್ನ ಒಂಥರಾ ಕೀಳಾಗಿ  ನೋಡಿದೀನಿ, ನಿನ್ನ ಮಾತಲ್ಲಿ ಹೇಳ್ಬೇಕಂದ್ರೆ ನಿನ್ನ ನಾನು  ನಾಯಿಗಿಂತ ಕಡೆಯಾಗಿ ಮಾಡಿದಿನಿ. ಎಲ್ಲಕ್ಕಿಂತ ದೊಡ್ಡ ನೋವು ಏನ್ ಗೊತ್ತಾ  ಸೋನಾ , ನಿನ್ನ ಲೈಫ್ ಅನ್ನೇ ಹಾಳು ಮಾಡಿ ಬಿಟ್ಟೆ. ನಿನ್ನ ಕೊನೆ ಉಸಿರಿರೋ ತನಕ ನಿನಗೆ ನೋವನ್ನ ಕೊಟ್ಟು ತುಂಬಾ ಪಾಪ ಮಾಡಿಬಿಟ್ಟೆ. ಅದಕ್ಕೆ ಏನು ಶಿಕ್ಷೆ ಇದೆಯೋ ಗೊತ್ತಿಲ್ಲ. ಪ್ರೀತಿ ತುಂಬಾ ಸಾರಿ ಸ್ವಾರ್ಥಿ ಆಗಿ ಬಿಡತ್ತೆ. ನಿಜವಾದ ಪ್ರೀತಿಗೆ ಮಾತ್ರ ಅಸೂಯೆ ಇರೋದು ಅಂತ ಎಲ್ಲೊ ಓದಿದ್ದೆ . ಅದು ನಿಜವಾಗಬಾರದು.
ಈ  ಜನುಮವು  ಒಂದೇ  ಸಾಲದು  
ನಿನ್ನ ಪ್ರೀತಿ ಪಡೆದ  ಋಣವ  ತುಂಬಲು 

ನನಗೆ ನೀನು ಬೇಕು, ನಿನ್ನ ಹುಚ್ಚು ಪ್ರೀತಿ ಬೇಕು. ನಾನು ಯಾವತ್ತು ನಿನಗೆ   ಮೋಸ ಮಾಡಿಲ್ಲ, ಮಾಡೋದು ಇಲ್ಲ ಚಿನ್ನು, ನನ್ನನ್ನು ನಂಬು, ಆ ನಂಬಿಕೆ ಮಾತ್ರ ನಮ್ಮ ಪ್ರೀತಿನ ಜೀವಂತ ಉಳಿಸೋದು. ಆದ್ರೆ, ಅದು ನಮ್ಮ ಮನಸ್ಸಲ್ಲಿ ಮಾತ್ರ.ಯಾಕೆ ಎಂದರೆ  ನಾವು ಇಬ್ರು ದೂರಾ ಇದ್ರೆ ಒಳ್ಳೇದು. ನಿನ್ನ ಬಾಳನ್ನ ಹಾಳು ಮಾಡೋಕೆ ನನಗೆ ಇಷ್ಟ ಇಲ್ಲ ಚಿನ್ನು. 
ನನಗೊತ್ತು ನೀನು ನನ್ನ ಫೋನ್ಗೇ  ಕಾಯ್ತಾ ಇರ್ತಿಯ, ಎಷ್ಟೋ   ಸರ್ತಿ ಫೋನ್ ಮಾಡೋಣ ಅನ್ಕೊಂಡೆ ಆದ್ರೆ ನೀನೆ ಆಣೆ ಮಾಡಿ ಹೋಗಿದಿಯಾ ನನ್ನ ಫೋನ್ ತಗೊಳೋಲ್ಲ ಅಂತ. ಚಿನ್ನು, ನಿನ್ನ ಒಳ್ಳೆಯ ಭವಿಷ್ಯಕ್ಕಾಗಿ ನಾನು ನಿನ್ನಿಂದ ದೂರ ಇರಲೇಬೇಕು. :-(   ನನಗ್ಗೊತ್ತು ಅದು ಅಷ್ಟು ಸುಲಭ ಅಲ್ಲ ಅಂತ, ಆದ್ರೆ ಬೇರೆ ದಾರಿ ಇದೆಯಾ?  
ಒಂದೇ ಸಮನೆ ನಿಟ್ಟುಸಿರು....
ಕೊನೆಯೀರದ ಏಕಾಂತವೇ  ಒಲವೇ ??

ಕೋಪ ಒಂದು ಬಿಟ್ರೆ ನಿನ್ನಂಥ ಒಳ್ಳೆ ಹುಡುಗನೇ ಯಾರು ಇಲ್ಲ. ನಿನ್ನ ಪ್ರೀತಿ, ನಿನ್ನ ಅಸಹಾಯಕತೆ ನನಗೆ ಅರ್ಥ ಆಗತ್ತೆ. ನನ್ನ ಜೊತೆ ಯಾವಾಗಲೂ  ಇರಬೇಕು ಅಂತ ನೀನು ಆಸೆ ಪಡೋದು ತಪ್ಪೇನು ಇಲ್ಲ, ಆದ್ರೆ ಆ ಆಸೆನ ಪೂರ್ತಿ ಮಾಡಕೆ ನನ್ನ ಕೈಲ್ಲಿ ಸಾಧ್ಯ  ಇಲ್ಲ, ನನ್ನ ನೋವನ್ನು ಅರ್ಥ ಮಾಡ್ಕೋ ದಯವಿಟ್ಟು.
humko  bhi  hai  khabar   tumko  bhi hai  pata 
ho raha  hai  juda dono ka rasta ... 

ಒಂದು ಮಾತ್ರ ನೆನಪಿಟ್ಕೋ , ನನ್ನ ಹೃದಯದ ಪ್ರತಿ ಬಡಿತದಲ್ಲೂ ನಿನ್ನದೇ ಹೆಸರು.. ಅಥವಾ ನಿನ್ನ ಹೆಸರು ಹೇಳಿದಾಗ ಮಾತ್ರ ನನ್ನ ಹೃದಯ ಬಡಿಯೋತ್ತೆ . 
ನನ್ನನ್ನ ಕ್ಷಮಿಸು ಅಂತ ಕೆಳ್ಕೊಳೋಲ್ಲ, ಆ ಅಧಿಕಾರ ನನಗಿಲ್ಲ, ನಾನು ಮಾಡಿದ್ದು  ನಿಜವಾದ ಪ್ರೀತಿ ಆಗಿದ್ರೆ, ನೀನು ನನ್ನ ಮರಿಬೇಕು, ನಮ್ಮ ಪ್ರೀತಿಗೆ ಸಾವು ಬರಬಾರದು ಅಂದ್ರೆ, ಇದು ಮಾತ್ರ ದಾರಿ :-(
kabhi alvida naa kehana.... 
kabhi alvida naa kehana....
ಆದ್ರೆ, ಆದ್ರೆ, ದಯವಿಟ್ಟು ನನ್ನ ಮುಂದೆ ಮಾತ್ರ ಬರಬೇಡ, ನಾನು ಮತ್ತೆ ಕರಗಿ ಹೋಗ್ತೀನಿ,ಮತ್ತೇ  ಅದೇ ಮಾತು, ಅದೇ ಜಗಳ, ಅದೇ ಎಲ್ಲ!!!! ಬೇಡ ಚಿನ್ನು, 
ನಾನೋದು ತೀರ ನೀನೊಂದು ತೀರ....
ಇದೇ  ಇಬ್ಬರಿಗೂ  ಒಳ್ಳೇದು :-( 

ಮನಸುಗಳ ಪ್ರೀತಿಗೆ ಬೇರೆ ಅವಶ್ಯಕತೆಗಳೇ ಇಲ್ಲ. ನಮ್ಮ ಪ್ರೀತಿ ಮಧ್ಯೆ ನಾವಾಗಲಿ ನಮ್ಮ ದೇಹ ಅಗಲಿ ಬರೋದು ಬೇಡ..
ಮನಸುಗಳ ಮಾತು ಮಧುರ...
ಹೇಳೋದು ಇನ್ನು ತುಂಬಾ ತುಂಬಾ ಇದೆ, ಮನಸ್ಸಿನ ಭಾವನೆಗಳಿಗೆ ಕಡಿವಾಣ ಹಾಕದೆ ಇದ್ರೆ ಅದು ಹಾಗೆ ಓಡುತ್ತ ಇರತ್ತೆ.
ಮತ್ತೆ ಸಿಗೋಣ ಅಂತ ಹೇಳೋಲ್ಲ. ನೀನು ಚೆನ್ನಾಗಿರು.. ಅದೇ ನನ್ನ ಬಯಕೆ..

ನಿನ್ನ ಪ್ರೀತಿಯ ???