ಯಾವಾಗ
ನಿನ್ನ ಜೀವವಾಗಿದ್ದೆ,ನಿನ್ನ ಜೀವನವಾಗಿದ್ದೆ.
ಯಾವಾಗ
ನಿನ್ನ ಬಾಳ ಜ್ಯೋತಿ ಆರಿಸುವ ಬಿರುಗಾಳಿಯಾದೆ ನಾನು?
ನಿನ್ನ ಹೃದಯದ ಪ್ರತಿ ಬಡಿತದ ಹೆಸರಾಗಿದ್ದೆ.
ಯಾವಾಗ
ನಿನ್ನ ಉಸಿರು ಕಟ್ಟೋ ಕೆಸರಾದೆ ನಾನು?
ನಿನ್ನ ಬಾಳಿನ ಒಂದೇ ಗುರಿಯಾಗಿದ್ದೆ.
ಯಾವಾಗ
ನಿನ್ನನ್ನೇ ಕೊಲ್ಲುವ ಹೆಮ್ಮಾರಿಯಾದೆ ನಾನು?
ಕೋಟಿ ಜನುಮದ ಸಂಗಾತಿಯಾಗುವ
ಕನಸು ಕಟ್ಟಿದ್ದೆ ನೀನು
ಕೋಟಿ ಜನುಮವಲ್ಲ,ಒಂದು ಕ್ಷಣವೂ
ಜೊತೆಯಾಗಲಿಲ್ಲ ನಾವು.
ಕೊನೆಯಾಗಲಿ ಈ ರಾತ್ರಿ ನನಗೆ
ಆ ಸೂರ್ಯ ನೋಡಿ ನಗಲಿ ನಾಳೆಗೆ
ಕೊನೆಯಾಗಲಿರುವ ಆ ನಾಳೆಗೆ ಕಾದು ಕುಳಿತಿರುವೆ.
ಮರಣಕ್ಕೆ ಮಹೂರ್ತ ಬಂದಿದೆ ಅಲ್ಲವೇ
ಮರಣವೇ ಮಹಾನವಮಿಯಾಗಲಿ ನನಗೆ
ಮರು ಜನ್ಮವಿದ್ದರೆ ನಮಗೆ,
ಮತ್ತೇ ಕೂಡೋಣ,ಕಾದಾಡೋಣ,
ಕಾಯುವೆಯಾ ಅಲ್ಲಿಯವರೆಗೂ?
ಇರುವೆಯಾ ಕೊನೆಯವರೆಗೂ?
ಇರುವೆಯಾ ಕೊನೆಯವರೆಗೂ?
ಮತ್ತೆ ಮತ್ತೆ ಓದಿಸಿಕೊಂಡ ಸಾಲುಗಳು.
ReplyDeleteಅತ್ಯಂತ ಭಾವ ತೀವ್ರ ಕವನ.
ಬದರೀನಾಥ್ ಅವರೇ
ReplyDeleteತುಂಬಾ ಧನ್ಯವಾದಗಳು.
ನನ್ನ ಈ ಕವನ ನಿಮಗ ಇಷ್ಟವಾಗಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ.
ನಿಮ್ಮ ಯಾವತ್ತು ಪ್ರೊತ್ಸಾಹನೆಗೆ ನಾನು ತುಂಬಾ ಋಣಿ .
ಎಲ್ಲಿಯಾದರೂ ತಪ್ಪಾಗಿದ್ದರೆ ತಿದ್ದಿರಿ.
ಜೀವನದ ಒಂದು ಆರ್ದ್ರ ಭಾವ ವಿರಹದೊಂದಿಗಿನ ನಿರಾಶೆ! ತೀವ್ರವಾದ ಭಾವಸ್ರಾವವಿದೆ ಈ ಕವಿತೆಯಲ್ಲಿ. ಓದುವವನೂ ಹೆಪ್ಪುಗಟ್ಟಿ ಹೆಬ್ಬಂಡೆಯಾಗಬಹುದು! ಕಡೆಯಲ್ಲಿ ಮುಂದಿನ ಜನ್ಮದಲ್ಲೂ ಪ್ರೀತಿಯನ್ನೇ ಹುಡುಕುವೆ ಎನ್ನುವಲ್ಲಿ ನಿರೀಕ್ಷೆಯನ್ನೂ, ಆಸೆಯನ್ನೂ ಕಟ್ಟಿಕೊಡುತ್ತದೆ ಕವಿತೆ.
ReplyDelete- ಪ್ರಸಾದ್.ಡಿ.ವಿ.
ಪ್ರಸಾದ ಅವರಿಗೆ ಧನ್ಯವಾದಗಳು,
ReplyDeleteಹೌದು, ಈ ಕವಿತೆಯಲ್ಲಿಯ ವೇದನೆ ಮತ್ತು ಆಸೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಿರ. ಅಂದರೆ ನನ್ನ
ಮನಸ್ಸಿನ ಭಾವನೆಗಳನ್ನು ನಾನು ಒಂದರ್ಥದಲ್ಲಿ ಸರಿಯಾಗಿ ವ್ಯಕ್ತ ಪಡಿಸುವ ಪ್ರಯತ್ನದಲ್ಲಿದ್ದೆನೆ ಅನ್ನುವ ಭರವಸೆ ಬಂತು