ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು ನೀನು
ಮಾತೇ ಕೇಳೋಲ್ಲ
ನನ್ನೋಳಗೆನೆ ಇದ್ದರೂ ನೀನು
ಒಡತಿ ನಾನಲ್ಲ
ಯಾಕೆ ನಿನಗೆ ಅವನ ಚಿಂತೆ
ನಿನ್ನ ಮನಸು ಅವನಿಗೆ ಗೊತ್ತೇ
ಪ್ರೀತಿ ಅನ್ನೋದು ಹುಚ್ಚರ ಸಂತೆ
ಆ ನೋವು ನಿನಗೆ ಬೇಕೇ ಮತ್ತೆ
ಅವನಿಲ್ಲದೇ ಜೀವನ ಇಲ್ಲ
ಅನ್ನೋದೆಲ್ಲಾ ನಿಜವೇ ಅಲ್ಲ
ನನ್ನ ಜೀವ ನಿನ್ನದು
ನಿನ್ನ ಬಡಿತ ನನ್ನದು